ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ನಿಂದ ಅಮಾನತಾಗಿರುವ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಆರೋಪಿಸಿದ್ದಾರೆ. ಸ್ವಕ್ಷೇತ್ರ ಮಾಗಡಿಯಲ್ಲಿ ಮಾತನ್ನಾಡುತ್ತಿದ್ದ ಅವರು, ಸದಾ ಕುಮಾರಸ್ವಾಮಿ ಅವರ ಜತೆ ಇರುವ ಹಕ್ಕಬುಕ್ಕರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಮುಂದಿನ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ನಾಲ್ಕು ಸ್ಥಾನ ಸಿಗತ್ತೆ. ಎರಡು ಸ್ಥಾನಗಳು ಕುಮಾರಸ್ವಾಮಿ ಮತ್ತು. ಹೆಚ್.ಡಿ.ರೇವಣ್ಣ ಅವರ ಪಾಲಾದರೆ, ಮತ್ತೆರಡು ಸ್ಥಾನಗಳು ಪಕ್ಷದಲ್ಲಿ