ಹೊಸ ಮೊಬೈಲ್ ಫೋನ್ ಖರೀದಿಸಲು ಹಣ ನೀಡದ ಮಲತಾಯಿಗೆ ಇಂತಹ ಗತಿ ತಂದ ಮಗ

ಮೀರತ್| pavithra| Last Modified ಶುಕ್ರವಾರ, 22 ಜನವರಿ 2021 (07:38 IST)
ಮೀರತ್ : ಹೊಸ ಮೊಬೈಲ್ ಫೋನ್ ಖರೀದಿಸಲು ನೀಡದ ಮಲತಾಯಿಯನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಂದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಯುವಕ ಮಲತಾಯಿಯ ಬಳಿ ಬಂದು ಹೊಸ ಮೊಬೈಲ್ ಖರೀದಿಸಲು 10000ರೂ ಕೇಳಿದ್ದಾನೆ. ಅದಕ್ಕೆ ಆಕೆ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಂದೆಯ ಬಳಿ ಹೋಗಿ ಕೊಲೆ ವಿಚಾರ ತಿಳಿಸಿ ಪರಾರಿಯಾಗಿದ್ದಾನೆ.

ಈ ಬಗ್ಗೆ ತಂದೆ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :