ಕೊಚ್ಚಿ : 42 ವರ್ಷದ ವ್ಯಕ್ತಿಯೊಬ್ಬ 80 ವರ್ಷದ ತಂದೆಯನ್ನು ಮನೆಯ ಕೋಣೆಯಲ್ಲಿ ಬೀಗ ಹಾಕಿ ಕೊಂದ ಅಮಾನವೀಯ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಮುಂಡಕ್ಕಾಯಂ ಪಟ್ಟಣದಲ್ಲಿ ನಡೆದಿದೆ. ಕುಡಿತದ ದಾಸನಾಗಿದ್ದ ಆರೋಪಿ ಮನೆಯಿಂದ ಹೊರಗೆ ಹೋಗುವಾಗ ತನ್ನ ವಯಸ್ಸಾದ ತಂದೆತಾಯಿಯನ್ನು ಕೋಣೆಯಲ್ಲಿ ಕೂಡುಹಾಕುತ್ತಿದ್ದ. ಅಲ್ಲದೇ ಅವರಿಗೆ ಯಾರು ಸಹಾಯ ಮಾಡಬಾರದೆಂದು ಮನೆಯ ಮುಂದೆ ನಾಯಿಯನ್ನು ಕಟ್ಟುತ್ತಿದ್ದ. ಇದರಿಂದ ತಂದೆ ಹಸಿವಿನಿಂದ ಹದಗೆಟ್ಟ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.