ಮುಂಬೈ: ತುತ್ತು ಕೊಡುವ ತಾಯಿಯ ಜೊತೆ ಕ್ಷುಲ್ಲುಕ ವಿಚಾರಕ್ಕೆ ಜಗಳವಾಡಿದ ಮಗ ಆಕೆಗೆ ಬೆಂಕಿ ಹಚ್ಚಿ ಜೀವಂತ ದಹನ ಮಾಡಿದ ಭೀಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಊಟ ಬಡಿಸುವ ವಿಚಾರಕ್ಕೆ 26 ವರ್ಷದ ಯುವಕ ತಾಯಿಯ ಜೊತೆ ಜಗಳವಾಡಿದ್ದಾನೆ. ಕೋಪದ ಭರದಲ್ಲಿ ಆಕೆಯನ್ನು ಮನೆಯ ಮುಂಭಾಗಕ್ಕೆ ಎಳೆದು ತಂದು ಒಣಗಿದ ಕಟ್ಟಿಗೆ ಇಟ್ಟು ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದಾಗಿ ಮಹಿಳೆ ಸಾವನ್ನಪ್ಪಿದ್ದಾಳೆ.ಪೊಲೀಸರು ಈಗ ಆರೋಪಿ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.