ಲಕ್ನೋ: ಮೃತ ತಂದೆಯ ಶರೀರವನ್ನು ಸಾಗಿಸಲು ಆಂಬ್ಯುಲೆನ್ಸ್ ಸಿಗದೇ ವ್ಯಕ್ತಿಯೊಬ್ಬ ಕಾರಿನ ಟಾಪ್ ಮೇಲೆ ಕಟ್ಟಿ ಸ್ಮಶಾನಕ್ಕೆ ಕರೆದೊಯ್ದ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಕೊರೋನಾದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಆಂಬ್ಯುಲೆನ್ಸ್ ಗಳ ಕೊರತೆಯಾಗಿದೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಬೇಸತ್ತ ಪುತ್ರ ಈ ಕೆಲಸ ಮಾಡಿದ್ದಾನೆ.ಕಾರಿನ ಟಾಪ್ ಮೇಲೆ ಮೃತಶರೀರವನ್ನು ಕಟ್ಟಿ ಸ್ಮಶಾನಕ್ಕೆ ಕರೆದೊಯ್ದು, ಅಂತಿಮ ಸಂಸ್ಕಾರ ನೆರವೇರಿಸಿದ್ದಾನೆ. ಆಂಬ್ಯುಲೆನ್ಸ್ ಗಾಗಿ ಆರೇಳು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಇಂತಹ