ವಾಜಪೇಯಿ ನಿಧನದ ಬಗ್ಗೆ ಸೋನಿಯಾ ಗಾಂಧಿ, ಪ್ರಿಯಾಂಕಾ, ರಾಹುಲ್ ಗಾಂಧಿ ಹೇಳಿದ್ದೇನು?

ನವದೆಹಲಿ| Krishnaveni K| Last Modified ಶುಕ್ರವಾರ, 17 ಆಗಸ್ಟ್ 2018 (09:45 IST)
ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ನಾಯಕಿಯಾಗಿದ್ದ ಸೋನಿಯಾ ಗಾಂಧಿ ಇದೀಗ ಅವರ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ವಾಜಪೇಯಿ ರಾಜಕೀಯವನ್ನೂ ಮೀರಿದ ಮೇರು ವ್ಯಕ್ತಿಯಾಗಿದ್ದರು. ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.


ಇನ್ನು, ರಾಹುಲ್ ಗಾಂಧಿ ಕೂಡಾ ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ಭಾರತ ತನ್ನ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ರಾಜಕೀಯ ವಿಚಾರಗಳ ಬಗ್ಗೆ ಟ್ವೀಟ್ ಮಾಡದ ಪ್ರಿಯಾಂಕಾ ವಾದ್ರಾ ಕೂಡಾ ವಾಜಪೇಯಿ ಆರೋಗ್ಯ ಗಂಭೀರವಾಗಿದ್ದಾಗಲೇ ಆರೋಗ್ಯ ಸುಧಾರಿಸಲಿ ಎಂದು ಟ್ವೀಟ್ ಮಾಡಿದ್ದು, ನಿಧನದ ಬಳಿಕವೂ ಸಂತಾಪ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :