Widgets Magazine

ಪ್ರಧಾನಿ ಆಡಿದ ಮಾತನ್ನೇ ಅಪರೂಪಕ್ಕೆ ಕಡತದಿಂದ ಹೊರಹಾಕಿದ ಸ್ಪೀಕರ್

ನವದೆಹಲಿ| Krishnaveni K| Last Modified ಶನಿವಾರ, 8 ಫೆಬ್ರವರಿ 2020 (11:10 IST)
ನವದೆಹಲಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಆಡಿದ ಮಾತೊಂದು ಪ್ರತಿಪಕ್ಷಗಳ ತೀವ್ರ ಆಕ್ಷೇಪಕ್ಕೆ ಗುರಿಯಾದ ಕಾರಣಕ್ಕೆ ರಾಜ್ಯಸಭೆ ಸ್ಪೀಕರ್ ಎಂ. ವೆಂಕಯ್ಯ ನಾಯ್ಡು ಕಡತದಿಂದ ಹೊರತೆಗೆದ ಘಟನೆ ಅಪರೂಪದಲ್ಲಿ ನಡೆದಿದೆ.

 
ಸಾಮಾನ್ಯವಾಗಿ ಪ್ರಧಾನಿಗಳು ಆಡಿದ ಮಾತು ಈ ರೀತಿ ಆಗುವುದು ವಿರಳ. ಆದರೆ ಎನ್ ಪಿಆರ್ ಕುರಿತು ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸುವಾಗ ಪ್ರಧಾನಿ ಆಡಿದ ಮಾತು ಸೂಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಸ್ಪೀಕರ್ ಕಡತದಿಂದ ಹೊರಹಾಕಿದ್ದಾರೆ.
 
ಇದೇ ದಿನ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಆಡಿದ ಒಂದು ಮಾತನ್ನೂ ಸ್ಪೀಕರ್ ಇದೇ ರೀತಿ ಮಾಡಿದ್ದಾರೆ. ಆದರೆ ಪ್ರಧಾನಿಯವರ ವಿಚಾರದಲ್ಲಿ ಈ ರೀತಿ ಆಗುವುದು ಅಪರೂಪ.ಇದರಲ್ಲಿ ಇನ್ನಷ್ಟು ಓದಿ :