ನವದೆಹಲಿ: ಚೀನಾ ಜತೆಗೆ ಗಡಿ ಸಂಘರ್ಷವಾದ ಬಳಿಕ ಭಾರತ ಗಡಿಯಲ್ಲಿ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚು ಮಾಡಲು ಎಲ್ಲಾ ರೀತಿಯ ಕ್ರಮಕ್ಕೆ ಮುಂದಾಗಿದೆ. ಇದೀಗ ಭಾರತದ ಗಡಿ ರಕ್ಷಣೆಗೆ ಸಹಾಯ ಮಾಡಬಲ್ಲ ಡ್ರೋಣ್ ಒಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ನ ಚಂಡೀಘಡ ಘಟಕ ತಯಾರಿಸಿಕೊಟ್ಟಿದೆ. ಇದು ಮಾನವ ರಹಿತ ಡ್ರೋಣ್ ಆಗಿದ್ದು ಎಂತಹ ಪ್ರತಿಕೂಲ ಹವಾಮಾನದಲ್ಲೂ ನಿಖರವಾದ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.ಶೀತವಲಯದಲ್ಲಿ ಕಾರ್ಯನಿರ್ವಹಿಸುವ