ಹೇಮಾಮಾಲಿನಿ ಭಾಷಣ ಮಾಡುತ್ತಿದ್ದ ವೇದಿಕೆ ಕುಸಿತ: ಅಪಾಯದಿಂದ ಪಾರು

ಮಥುರಾ, ಸೋಮವಾರ, 21 ಏಪ್ರಿಲ್ 2014 (19:37 IST)

ಬಿಜೆಪಿಯ ಮಥುರಾ ಕ್ಷೇತ್ರದ ಅಭ್ಯರ್ಥಿ ಮತ್ತು ಬಾಲಿವುಡ್ ನಟಿ ಹೇಮಾಮಾಲಿನಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಮಯದಲ್ಲಿ ವೇದಿಕೆಯ ಭಾಗಶಃ ಭಾಗ ಕುಸಿದು ಅವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 
 
ರಿಫೈನರಿ ನಾಗರ್ ನಲ್ಲಿ ಸಮಾವೇಶವನ್ನು ನಡೆಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು ನಟಿ ಹೇಮಾಮಾಲಿನಿಯವರಿಗೆ ಯಾವ ರೀತಿಯ ಅಪಾಯವೂ ಆಗಿಲ್ಲ ಎಂದು ತಿಳಿದು ಬಂದಿದೆ. 
'ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಚಿಕ್ಕ ಸಾರ್ವಜನಿಕ ಸಭೆಯೊಂದಕ್ಕೆ ಆಗಮಿಸಲಿದ್ದ  'ಬಸಂತಿ'ಯನ್ನು ನೋಡಲು ಮೂರು ಗಂಟೆಗಳಿಂದ ಕಾಯುತ್ತಿದ್ದ ಅಪಾರ ಸಂಖ್ಯೆಯ ಜನಸಾಗರವನ್ನು, ಅಂತಿಮವಾಗಿ ಸುಮಾರು 7:55 ಗಂಟೆಗೆ ಹೇಮಾ ಮಾಲಿನಿ  ಸ್ಥಳಕ್ಕೆ ತಲುಪಿದಾಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ'. 
 
'ಮಾಲಿನಿ ಚಿಕ್ಕ ದಾರಿಯನ್ನು ಮಾಡಿಕೊಂಡು ವೇದಿಕೆ ಬಳಿ ಬರಲು ಪ್ರಾರಂಭಿಸಿದಾಗ ಆ ಪುಟ್ಟ ಮೈದಾನದಲ್ಲಿದ್ದ ಪುರುಷರು, ಮಹಿಳೆಯರು ಮತ್ತು ಮಕ್ಕಳು ವೇದಿಕೆಯ ಬಳಿ ಓಡತೊಡಗಿದರು. ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಯಿತು. ಆ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಂಘಟಕ ವೇದಿಕೆ ಕುಸಿದು ಬೀಳುತ್ತದೆ ಎಂದು ನೆರೆದ ಜನರನ್ನು ಎಚ್ಚರಿಸಿದ'. 
 
'ಆದರೆ ಕನಸಿನ ಕನ್ಯೆಯ ಅಭಿಮಾನಿಗಳು ಯಾರ ಮಾತಿಗೂ ಕಿವಿಗೊಡಲಿಲ್ಲ. ಪರಿಣಾಮವಾಗಿ ವೇದಿಕೆಯ ಒಂದು ಭಾಗ ಕುಸಿದು ಬಿತ್ತು. ಹೆಚ್ಚು ಕಡಿಮೆ ಮೂರು ನಿಮಿಷಗಳಲ್ಲಿ ತನ್ನ ಭಾಷಣವನ್ನು ಮುಗಿಸಿದ ಆಕೆ ವೇದಿಕೆ ಕುಸಿಯುತ್ತಿದೆ ಎಂದು ಹೇಳುತ್ತ ಗಡಿಬಿಡಿಯಲ್ಲಿ ಸಾರ್ವಜನಿಕ ಸಭೆಯನ್ನು ಮುಗಿಸಿದರು' ಎಂದು ಮೂಲಗಳು ತಿಳಿಸಿವೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ನಾಮಪತ್ರಕ್ಕೆ ಅನುಮೋದನೆ ನೀಡಲು ನಿರಾಕರಿಸಿದ ಬಿಸ್ಮಿಲ್ಲಾ ಖಾನ್ ಪುತ್ರ

ಬಿಜೆಪಿಯ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ...

news

ಶೂಟ್‌ಔಟ್ ಪ್ರಕರಣವನ್ನು ಸಿಬಿಐಗೆ ವಹಿಸಲು ಪೂಜಾರಿ ಆಗ್ರಹ

ಮಂಗಳೂರು: ಮೇಲ್ನೋಟಕ್ಕೆ ತನಿಕೋಡುವಿನ ಚೆಕ್‌ಪೋಸ್ಟ್‌ನಲ್ಲಿ ಎಎನ್‌ಎಫ್ ಶೂಟ್ ಔಟ್ ಹಾಡುಹಗಲೇ ನಡೆದ ಹತ್ಯೆ ...

news

ಮರುಕಳಿಸಿದ ಡಿಸಂಬರ್ 16ರ ಘಟನೆ: ಚಲಿಸುತ್ತಿರುವ ಬಸ್‌ನಲ್ಲಿಯೇ ಸಾಮೂಹಿಕ ಅತ್ಯಾಚಾರ

ಬುಡಕಟ್ಟು ಸಮುದಾಯದ ಹುಡುಗಿಯೊಬ್ಬಳು ಚಲಿಸುತ್ತಿರುವ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾದ ಘಟನೆ ...

news

ಮೋದಿ ಎಂದರೆ ಮೆನ್ ಆಫ್ ಡೆಮೆಜ್ ಟು ಇಂಡಿಯಾ, ಬಿಜೆಪಿ ಎಂದರೆ ಭಾರತ ಜಲಾವೋ ಪಾರ್ಟಿ: ಸಿಂಘ್ವಿ

ಬಿಜೆಪಿಯ ಮೇಲೆ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಬಿಜೆಪಿಯ ...