ಹಿಂದೂಗಳ ಹೊಸ ವರ್ಷ ಎಂದೇ ಕರೆಯಲ್ಪಡುವ ಯುಗಾದಿಹಬ್ಬ ಮುಗಿಯುತ್ತಿದ್ದಂತೆ ಮುಸ್ಲಿಮರ ಪವಿತ್ರ ರಂಜಾನ್ ಆರಂಭವಾಗಿದೆ.ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ ಕಾಣಿಸಿಕೊಂಡಿದ್ದು, ಮುಸ್ಲಿಂ ಬಾಂಧವರು ಉಪವಾಸ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.ಕಳೆದ ವರ್ಷ ಕೊರೊನಾ 2ನೇ ಅಲೆಯಿಂದಾಗಿ ಮನೆ-ಮನೆಗೆ ಸೀಮಿತಗೊಳಿಸಿದ್ದ ರಂಜಾನ್ ಪ್ರಾರ್ಥನೆಯನ್ನು ಈ ಬಾರಿ ಅದ್ಧೂರಿಯಿಂದ ಆಚರಿಸುವ ಉತ್ಸಾಹದಲ್ಲಿದ್ದಾರೆ.ಅದಕ್ಕಾಗಿ ಮಾರುಕಟ್ಟೆಗಳಿಗೆ ಇಂದಿನಿಂದಲೇ ಭೇಟಿ ನೀಡುತ್ತಿದ್ದು, ಮುಸ್ಲಿಂ ಬಾಂಧವರು ತಮಗಿಷ್ಟದ ಉಡುಪು, ಅಲಂಕಾರಿಕ ವಸ್ತುಗಳು, ಮಹಿಳೆಯರು ಕುರ್ತಾ, ಬುರ್ಕಾ ಹಬ್ಬದ ಅಡುಗೆಗೆ