ನವದೆಹಲಿ: ಕಾಂಗ್ರೆಸ್ ನಲ್ಲಿ ಒಳಗೊಳಗೆ ನಡೆಯುತ್ತಿರುವ ಬೇಗುದಿಯ ನಡುವೆ ಪಂಚ ರಾಜ್ಯ ಚುನಾವಣೆಯ ಗೆಲುವು ರಾಹುಲ್ ಗಾಂಧಿಗೆ ಮಹತ್ವದ್ದಾಗಲಿದೆ. ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ, ಅವರ ಇತ್ತೀಚೆಗಿನ ಕೆಲವು ಹೇಳಿಕೆಗಳ ಬಗ್ಗೆ ಹಿರಿಯ ನಾಯಕರಲ್ಲಿ ಅಸಮಾಧಾನವಿದೆ. ಕೆಲವರು ಅದನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.ಒಂದು ವೇಳೆ ಅವರಿಲ್ಲಿ ಸೋತರೆ ರಾಹುಲ್ ನಾಯಕತ್ವದ ಬಗ್ಗೆ ಹುಟ್ಟಿಕೊಂಡಿರುವ ಪ್ರಶ್ನೆಗಳು, ಅಸಮಾಧಾನಗಳು ಹೆಚ್ಚಾಗಲಿವೆ. ಒಂದು ವೇಳೆ ಗೆದ್ದರೆ