ದೆಹಲಿ : ಯಾವುದು ಸರಿ ಆಗಿರುವುದೋ ಅದರ ಪರ ಹಾಗೂ ಯಾವುದೂ ತಪ್ಪಾಗಿರುವುದೋ ಅದರ ವಿರುದ್ಧ ನಿಲ್ಲಿ ಎಂದು ಬಾರ್ ಅಸೋಸಿಯೇಶನ್ ಸದಸ್ಯರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್. ವಿ .ರಮಣ್ ಮನವಿ ಮಾಡಿದರು. ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಆಯೋಜಿಸಿದ ಸಂವಿಧಾನ ದಿನಆಚರಣೆ ಕಾರ್ಯಕ್ರಮದಲ್ಲಿ ಅವರು, ಪ್ರಚೋದಿತ ಹಾಗೂ ಉದ್ದೇಶ ಪೂರ್ವಕ ದಾಳಿಯಿಂದ ನ್ಯಾಯಾಂಗವನ್ನು ರಕ್ಷಿಸಿ ಎಂದು ವಕೀಲರಿಗೆ ಹೇಳಿದರು. ಚರ್ಚೆಗೆ ಅವಕಾಶ ನೀಡಿರುವುದೇ ಭಾರತೀಯ ಸಂವಿಧಾನದ ಮುಖ್ಯ ವೈಶಿಷ್ಟ್ಯವಾಗಿದೆ.