ಮಗಳನ್ನು ಹೊಡೆದು ಕೊಂದ ತಂದೆ

ತಿರುವನಂತಪುರಂ| pavithra| Last Modified ಬುಧವಾರ, 7 ಏಪ್ರಿಲ್ 2021 (07:56 IST)
ತಿರುವನಂತಪುರಂ : 5 ವರ್ಷದ ಬಾಲಕಿಯನ್ನು 23 ವರ್ಷದ ಮಲತಂದೆ ಚಿತ್ರಹಿಂಸೆ ನೀಡಿ ಕೊಂದ ಘಟನೆ ಕೇರಳದ ಪಥನಮತ್ತಟ್ಟಾ ಜಿಲ್ಲೆಯಲ್ಲಿ ನಡೆದಿದೆ.

ತಾಯಿ ದಿನಕೂಲಿಗಾಗಿ ಹೊರಗೆ ಹೋಗುತ್ತಿದ್ದಳು. ಮಲತಂದೆ ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ. ಆದರೆ ಆತ ತಾಯಿ ಇಲ್ಲದ ವೇಳೆ ಅಳುತ್ತಿದ್ದ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. ಇದರಿಂದ ಮಗು ಪ್ರಜ್ಞೆ ತಪ್ಪಿ ಬಿದ್ದಿದೆ. ಮನೆಗೆ ಬಂದ ತಾಯಿ ಬಾಲಕಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದಾಗ ಬಾಲಕಿ ಸಾವನಪ್ಪಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯ ಮೈಮೇಲೆ ಗಾಯಗಳಾದ ಹಿನ್ನಲೆಯಲ್ಲಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿ ಮಲತಂದೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :