ಸನೋಸರಾ(ಗುಜರಾತ್): ಗುಜರಾತ್ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಯ ಸೇವೆಯಿಂದ ನವದೆಹಲಿಯಲ್ಲಿ ಪ್ರಧಾನಿಯಾಗಿ ತಮ್ಮ ಕೆಲಸಕ್ಕೆ ಸಹಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಪ್ರಧಾನಿಯಾಗಿ ಎರಡು ವರ್ಷಗಳ ಬಳಿಕ ತಾವು ನಿರ್ದಿಷ್ಟ ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿತುಕೊಂಡೆ ಎಂದು ಪ್ರಧಾನಿ ನುಡಿದರು.