ಲಕ್ನೋ : 7 ತಿಂಗಳ ಮಗುವನ್ನು ಬೀದಿ ನಾಯಿಗಳು ಕ್ರೂರವಾಗಿ ಕಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 100ನ ಐಷಾರಾಮಿ ಲೋಟಸ್ ಬೌಲೆವಾರ್ಡ್ ಸೊಸೈಟಿಯಲ್ಲಿ ನಡೆದಿದೆ.ಘಟನೆಯಿಂದ ಬೆಚ್ಚಿ ಬಿದ್ದಿರುವ ನಿವಾಸಿಗಳು ಶ್ವಾನ ಪ್ರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವರದಿಗಳ ಪ್ರಕಾರ ಬೀದಿ ನಾಯಿಗಳ ದಾಳಿಗೆ ಬಲಿಯಾದ 7 ತಿಂಗಳ ಮಗುವನ್ನು ಅರವಿಂದ್ ಎಂದು ಗುರುತಿಸಲಾಗಿದೆ.ಮಗುವಿನ ತಾಯಿ ಸಪ್ನಾ ದೇವಿ ದಿನಗೂಲಿ ಕೆಲಸಕ್ಕೆ ಹೋಗುವಾಗ ಮಗುವನ್ನು ಆಟವಾಡಲು ಸೊಸೈಟಿಯೊಳಗೆ