ಪಾಟ್ನಾ: ಪರೀಕ್ಷೆಗೆ ಕಾಪಿ ಚೀಟಿ ಕೊಂಡೊಯ್ದಿದ್ದ ಹುಡುಗನಿಗೆ ಅದುವೇ ತನ್ನ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ಕಲ್ಪನೆಯೂ ಇರಲಿಲ್ಲ.12 ವರ್ಷದ ಬಾಲಕ ದಯಾ ಕುಮಾರ್ ಎಂಬಾತ ಪರೀಕ್ಷೆ ಹಾಲ್ ಗೆ ಕಾಪಿ ಚೀಟಿ ತೆಗೆದುಕೊಂಡು ಹೋಗಿದ್ದ. ಅದೇ ತರಗತಿಯಲ್ಲಿ ಆತನ ಸಹೋದರಿಯೂ ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ವೇಳೆ ತನ್ನ ತಂಗಿಗೆ ಸಹಾಯವಾಗಲೆಂದು ಕಾಪಿ ಚೀಟಿಯನ್ನು ಆಕೆಯತ್ತ ಎಸೆದಿದ್ದ.ಆದರೆ ದುರದೃಷ್ಟವಶಾತ್ ಆ ಚೀಟಿ ಇನ್ನೊಬ್ಬ ಹುಡುಗಿಯ ಬಳಿ ಬಿತ್ತು. ಇದನ್ನು ನೋಡಿ ಆ