ರಾಯಗಢ : ದುರಂತ ಘಟನೆಯೊಂದರಲ್ಲಿ, ಒಡಿಶಾದ ರಾಯಗಡ ಜಿಲ್ಲೆಯಲ್ಲಿ 13 ವರ್ಷದ ವಿದ್ಯಾರ್ಥಿಯೊಬ್ಬ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ನೆಟ್ ವರ್ಕ್ ಹುಡುಕಿಕೊಂಡು ಹತ್ತಿದ್ದ ಬೆಟ್ಟದ ಮೇಲಿನಿಂದ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಬುಡಕಟ್ಟು ಪ್ರಾಬಲ್ಯದ ರಾಯಗಡ ಜಿಲ್ಲೆಯ ಪದ್ಮಾಪುರ ಬ್ಲಾಕ್ ವ್ಯಾಪ್ತಿಯ ಪಂದ್ರಗಾಡ ಗ್ರಾಮದ ಆಂಡ್ರಿಯಾ ಜಗರಂಗ ಎಂದು ಗುರುತಿಸಲಾಗಿದೆ. ಕಟಕ್ ನ ಮಿಷನೆರಿ ಶಾಲೆಯ ವಿದ್ಯಾರ್ಥಿಯಾದ ಆಂಡ್ರಿಯಾ, ಕೋವಿಡ್ ಪ್ರೇರಿತ ಲಾಕ್ ಡೌನ್