Widgets Magazine

ವಿದ್ಯಾರ್ಥಿಯನ್ನು ಕಾಲೇಜ್ ಕಾಂಪಸ್ ನಲ್ಲಿ ವಿದ್ಯಾರ್ಥಿಗಳೇ ಮಾನಭಂಗ ಮಾಡಿದರು!

ಲಕ್ನೋ| Krishnaveni K| Last Updated: ಸೋಮವಾರ, 12 ಅಕ್ಟೋಬರ್ 2020 (16:20 IST)
ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಮಾನಭಂಗ ಪ್ರಕರಣ ವರದಿಯಾಗಿದೆ. ವಿದ್ಯಾರ್ಥಿಯನ್ನು ಕಾಲೇಜ್ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳೇ ಮಾನಭಂಗ ಮಾಡಿ ವಿಡಿಯೋ ಮಾಡಿದ ಘಟನೆ ವರದಿಯಾಗಿದೆ.

 
ತನ್ನ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಗ ಕಾಲೇಜ್ ಗೆ ಬಂದಿದ್ದಾಗ ಅದೇ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಗುಂಪೊಂದು ತನ್ನನ್ನು ಬಲವಂತವಾಗಿ ಹಾಸ್ಟೆಲ್ ಗೆ ಕರೆದೊಯ್ದಿಲ್ಲದೆ, ಅವರಲ್ಲೊಬ್ಬಾತ ಮಾನಭಂಗ ಮಾಡಿದ್ದು, ಉಳಿದವರು ವಿಡಿಯೋ ಮಾಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ. ವಿಪರ್ಯಾಸವೆಂದರೆ ಘಟನೆ ನಡೆದ ವೇಳೆ ಕಾಲೇಜ್ ನಲ್ಲಿ ಸಿವಿಲ್ ಪರೀಕ್ಷೆಯೊಂದು ನಡೆಯುತ್ತಿತ್ತು. ಆ ವೇಳೆ ಪೊಲೀಸರು ಅಲ್ಲಿದ್ದರು. ಇಷ್ಟೆಲ್ಲಾ ಇದ್ದಿದ್ದರೂ ಸಂತ್ರಸ್ತೆಯನ್ನು ರಕ್ಷಿಸಲಾಗಲಿಲ್ಲ.
ಇದರಲ್ಲಿ ಇನ್ನಷ್ಟು ಓದಿ :