ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಗುರುವಾರ ಸುರಂಗ ಕುಸಿತವಾಗಿದ್ದು,36 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಚರಣೆ ಬಳಿಕ ಇಲ್ಲಿಯವರೆಗೆ ಅವಶೇಷಗಳಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀನಗರ-ಜಮ್ಮು ಹೆದ್ದಾರಿಯ ಖೋನಿನಲ್ಲ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಪರಿಣಾಮ ಕಾರ್ಮಿಕರು ಅವಶೇಷಗಳಡಿ ಹೂತು ಹೋಗಿದ್ದರು.ಸುರಂಗ ನಿರ್ಮಿಸುತ್ತಿದ್ದ ಕಂಪನಿ ರಕ್ಷಣಾ ಮಾನದಂಡಗಳನ್ನು ಅನುಸರಿಸದಿರುವುದೇ ದುರಂತಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಂಪನಿ ನಿರ್ಲಕ್ಷ್ಯಕ್ಕೆ ಪೊಲೀಸರು