ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸತೀಶ್ ಧವನ್ ಬಾಹ್ಯಾಕಾಶ ಉಡಾವಣೆ ಕೇಂದ್ರದಿಂದ ಜಿಸ್ಯಾಟ್-19 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಸಂಜೆ 640 ಟನ್ ತೂಕದ ಜಿಸ್ಯಾಟ್-19 ಉಪಗ್ರಹವನ್ನು ಯಶಸ್ವಿಯಾಗಿ ಗಗನಕ್ಕೆ ಹಾರಿಸಲಾಗಿದೆ. ಕ್ರಯೋನಿಕ್ ತಂತ್ರಜ್ಞಾನ ಹೊಂದಿರುವ ಜಿಸ್ಯಾಟ್-19 ಉಪಗ್ರಹ ಉಡಾವಣೆಗೆ ಆದಿಚುಂಚನಗಿರಿ ಶ್ರೀಗಳು, ಹಿರಿಯ ವಿಜ್ಞಾನಿಗಳು ಸಾಕ್ಷಿಯಾದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸತೊಂದು ವಿಕ್ರಮ ಸಾಧಿಸಿರುವುದಕ್ಕೆ ರಾಷ್ಟ್ರಪತಿ