ನವದೆಹಲಿ: ಇಂದು ದೇಶಾದ್ಯಂತ 69ನೇ ಗಣರಾಜ್ಯೋತ್ಸವದ ಸಂಭ್ರಮ. ಉಗ್ರರ ದಾಳಿ ಭೀತಿಯಿಂದಾಗಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆ ಭದ್ರತಾ ಪಡೆಗಳಿಗೆ ಭಾರೀ ಯಶಸ್ಸೊಂದು ದಕ್ಕಿದೆ. ಇಬ್ಬರು ಅರಬ್ ನಾಗರಿಕರು ಸೇರಿ ಮೂವರು ಶಂಕಿತರನ್ನು ವಶ ಪಡಿಸಿಕೊಂಡಿದ್ದಾರೆ.