ನವದೆಹಲಿ : ಭಾರತ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್,ಶ್ರೀ ಶ್ರೀ ಠಾಕೂರ್ ಅನುಕುಲ್ ಚಂದ್ರ ಅವರನ್ನು ದೇವರೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ನ್ನು ವಜಾಗೊಳಿಸಿದೆ.ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು, ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಅರ್ಜಿದಾರ ಉಪೇಂದ್ರ ನಾಥ್ ದಾಲೈ ತನ್ನ ಅರ್ಜಿಯನ್ನು ಓದಲು ಮುಂದಾದ. ಈ ವೇಳೆ ನಿಲ್ಲಿಸಿ ಎಂದ ಪೀಠ,