ನವದೆಹಲಿ: ನಿನ್ನೆ ರಾತ್ರಿ ಅಗಲಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.ಲೋಕಸಭೆಯಲ್ಲಿ ತಾವು ಕುಳಿತಿದ್ದ ಜಾಗಕ್ಕೇ ಬಂದು ಮಾತನಾಡಿಸುತ್ತಿದ್ದರು. ಎಲ್ಲರಿಗೂ ತಾಯಿ ಸ್ವರೂಪರಾಗಿದ್ದರು. ವಿಶೇಷವೆಂದರೆ ನಮ್ಮ ಬಳಿ ಯಾವತ್ತೂ ಕನ್ನಡದಲ್ಲೇ ಮಾತನಾಡಿಸುತ್ತಿದ್ದರು ಎಂದು ದೇವೇಗೌಡರು ಸುಷ್ಮಾ ಗುಣಗಾನ ಮಾಡಿದ್ದಾರೆ.ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಸುಷ್ಮಾ ಕನ್ನಡಿಗರ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು. ಅವಕಾಶ ಸಿಕ್ಕಾಗಲೆಲ್ಲಾ