ತಮ್ಮ ಬಗ್ಗೆ ಬಂದ ರೂಮರ್ ಗಳಿಗೆ ಸ್ಪಷ್ಟನೆ ಕೊಟ್ಟ ಮಾಜಿ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ, ಮಂಗಳವಾರ, 11 ಜೂನ್ 2019 (10:14 IST)

ನವದೆಹಲಿ: ಕಳೆದ ಬಾರಿ ಮೋದಿ ಸಂಪುಟದಲ್ಲಿ ಕೇಂದ್ರ ವಿದೇಶಾಂಗ ಸಚಿವೆಯಾಗಿ ಜನಪ್ರಿಯ ಕೆಲಸ ಮಾಡಿದ್ದ ಸುಷ್ಮಾ ಸ್ವರಾಜ್ ಆಂಧ್ರಪ್ರದೇಶದ ರಾಜ್ಯಪಾಲೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
 


ಅದಕ್ಕೆ ಈಗ ಸ್ವತಃ ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆಲ್ಲಾ ಮೊದಲು ಕಾರಣವಾಗಿದ್ದು ಕೇಂದ್ರ ಸಚಿವ ಹರ್ಷವರ್ಧನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸುಷ್ಮಾ ಸ್ವರಾಜ್ ರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲೆಯಾಗಿ ನೇಮಿಸಲಾಗಿದೆ. ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದು.
 
ಬಳಿಕ ಇದಕ್ಕೆ ನೀರೆರೆಯುವಂತೆ ಸುಷ್ಮಾ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಕ್ಕೆ ಟ್ವಿಟರಿಗರು ಆಕೆ ರಾಜ್ಯಪಾಲೆ ಎಂದು ಘೋಷಿಸಿಯೇ ಬಿಟ್ಟರು! ಆದರೆ ಇಷ್ಟೆಲ್ಲಾ ರೂಮರ್ ಗಳು ಹಬ್ಬುತ್ತಿದ್ದಂತೆ ಟ್ವೀಟ್ ಮಾಡಿದ ಸುಷ್ಮಾ ನಾನು ಆಂಧ್ರ ರಾಜ್ಯಪಾಲೆಯಾಗುತ್ತಿದ್ದೇನೆಂಬ ಸುದ್ದಿ ಸುಳ್ಳು. ನಾನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಕ್ಕೆ ಟ್ವಿಟರಿಗರು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿ.ಎಮ್‌.ಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಲು ಶ್ರೀಮಂತ ರೈತನೊಬ್ಬ ಮಾಡಿದ್ದೇನು ಗೊತ್ತಾ?

ಚೀನಾ : ಚೀನಾದಲ್ಲಿ ಶ್ರೀಮಂತ ರೈತನೊಬ್ಬ ತನ್ನ ಬಿ.ಎಮ್‌.ಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಲು ಕೋಳಿ ಕಳ್ಳತನ ...

news

ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟು ಗೊತ್ತಾ?

ಅಮೇರಿಕಾ : ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ...

news

‘ಸಿಎಂ ದೊಂಬರಾಟ ಮಾಡೋದನ್ನ ಬಿಡಲಿ ಎಂದ ಬಿಎಎಸ್ವೈ’

ಜಿಂದಾಲ್ ಗೆ ಭೂಮಿ ನೀಡುತ್ತಿರೋ ಸರ್ಕಾರ ಕಿಕ್ ಬ್ಯಾಕ್ ಪಡೆದುಕೊಂಡು ಭೂಮಿ ನೀಡುತ್ತಿದೆ ಎಂದು ಮೈತ್ರಿ ...

news

ಕನ್ನಡ ರಂಗಭೂಮಿಯ ಕರಾಳ ದಿನ: ಉಮಾಶ್ರೀ

ಕನ್ನಡ ರಂಗಭೂಮಿಯ ದಿಗ್ಗಜರಲ್ಲೊಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಡಾ. ...