ನವದೆಹಲಿ: ರಾಷ್ಟ್ರಪತಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಲಿದೆ ಎನ್ನುವದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮೂಲಗಳ ಪ್ರಕಾರ ಸುಷ್ಮಾ ಸ್ವರಾಜ್ ಬಗ್ಗೆ ಬಿಜೆಪಿಯಲ್ಲಿ ಒಲವಿದೆಯಂತೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ರಾಷ್ಟ್ರಪತಿ ಹುದ್ದೆಗೇರಿಸಲು ಬಿಜೆಪಿಯಲ್ಲಿ ಒಲವಿದೆ. ಇವರಿಗೆ ಆರ್ ಎಸ್ ಎಸ್ ಬೆಂಬಲವೂ ಇದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.ವಿರೋಧ ಪಕ್ಷಗಳಿಗೂ ಸಹಮತವಾಗುವ ಅಭ್ಯರ್ಥಿಯನ್ನು ಹುಡುಕುವ ಬದಲು ಸಮರ್ಥ ನಾಯಕಿ ಸುಷ್ಮಾ