ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿ ದಳದ ಅಮಾನತ್ತುಗೊಂಡ ಶಾಸಕ ಪರ್ಗತ್ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾಲಂದರ್ ಕಂಟೋನ್ಮೆಂಟ್ನಲ್ಲಿ ನೀರು ಶುದ್ದೀಕರಣ ಘಟಕ ಕುರಿತಂತೆ ಅಕಾಲಿ ದಳದ ಹಿರಿಯ ಮುಖಂಡರೊಂದಿಗಿನ ಹಲವು ಭಿನ್ನಾಭಿಪ್ರಾಯಗಳಿಂದಾಗಿ ಪರ್ಗತ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿತ್ತು. ಭಾರತೀಯ ಹಾಕಿ ಕಂಡದ ನಾಯಕರಾಗಿದ್ದ ಪರ್ಗತ್ ಸಿಂಗ್, ಜನಪ್ರಿಯವಲ್ಲದ ಯೋಜನೆಗಳ ಜಾರಿಗೆ