ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಅವರನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ರಜನಿ ಜತೆಗೆ ಜತೆಯಾಟವಾಡುವ ಒಲವು ವ್ಯಕ್ತಪಡಿಸಿದೆ. ರಜನಿ ರಾಜಕೀಯಕ್ಕೆ ಬಂದ ಕುರಿತು ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು. ಅಮಿತ್ ಶಾ ಬರುವ ಮೊದಲು ಬಿಜೆಪಿ ನಾಯಕರು ರಜನಿ ರಾಜಕೀಯದ ಕುರಿತು ಚರ್ಚಿಸಿದರಲ್ಲದೆ, ಮಾಧ್ಯಮಗಳೊಂದಿಗೂ ಅಭಿಪ್ರಾಯ ಹಂಚಿಕೊಂಡರು.ಮೊದಲಿನಿಂದಲೂ ಪ್ರಧಾನಿ ಮೋದಿ ನಿರ್ಧಾರಗಳನ್ನು ಸ್ವಾಗತಿಸುತ್ತಲೇ ಬಂದಿರುವ ರಜನೀಕಾಂತ್