ನವದೆಹಲಿ: ಭಾರತ ದೇಶ ಮತ್ತು ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಲ್ಡೀವ್ಸ್ ಗೆ ಬಹಿಷ್ಕಾರ ಬೆನ್ನಲ್ಲೇ ಟಾಟಾ ಗ್ರೂಪ್ ಈಗ ಲಕ್ಷದ್ವೀಪದಲ್ಲಿ ಎರಡು ರೆಸಾರ್ಟ್ ನಿರ್ಮಿಸಲು ಮುಂದಾಗಿದೆ.ಮಾಲ್ಡೀವ್ಸ್ ಗಿಂತ ಸುಂದರವಾಗಿ ನಮ್ಮ ಲಕ್ಷದ್ವೀಪವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಟಾಟಾ ಗ್ರೂಪ್ ಲಕ್ಷದ್ವೀಪ ಅಭಿವೃದ್ಧಿಗೆ ಕೈ ಜೋಡಿಸಲಿದೆ. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಎರಡು ಸುಸಜ್ಜಿತ ರೆಸಾರ್ಟ್ ಗಳನ್ನು ನಿರ್ಮಿಸಲಾಗುತ್ತದೆ. ಸುಹೇಲಿಯಲ್ಲಿ ಆರಂಭಿಸಲಿರುವ ದಿ ತಾಜ್ ರೆಸಾರ್ಟ್ 110 ಕೊಠಡಿಗಳನ್ನು ಒಳಗೊಳ್ಳಲಿದೆ.