ಗುವಾಹಟಿ: ಶಾಲೆಯ ಅಡುಗೆ ಮನೆಯಲ್ಲಿ ಗೋಮಾಂಸ ಭಕ್ಷ್ಯ ತಯಾರಿಸಿ ಶಿಕ್ಷಕರೊಬ್ಬರು ಅರೆಸ್ಟ್ ಆಗಿದ್ದಾರೆ. ಅಸ್ಸಾಂನಲ್ಲಿ ಈ ಘಟನೆ ನಡೆದಿದೆ.ನಾಸಿರುದ್ದೀನ್ ಅಹಮ್ಮದ್ ಎಂಬ ಶಿಕ್ಷಕ ದಾರಂಗ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಗೋಮಾಂಸ ತಯಾರಿಸಿ ಸಿಕ್ಕಿಬಿದ್ದಿದ್ದಾರೆ.ತಾನು ಮಾಂಸದಡುಗೆ ಮಾಡಿದ್ದಲ್ಲದೆ, ಕೆಲವು ವಿದ್ಯಾರ್ಥಿಗಳಿಗೂ ಅದನ್ನು ಉಣಬಡಿಸಿದ್ದಾರೆ ಎಂದು ಶಿಕ್ಷಕನ ಮೇಲೆ ಆರೋಪಿಸಲಾಗಿದೆ. ಈ ರೀತಿ ಮಾಡುವ ಮೂಲಕ ಶಿಕ್ಷಕ ಒಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ