ನೋಯ್ಡಾ: ಶಿಕ್ಷಕರ ಥಳಿತದಿಂದಾಗಿ ತಲೆಗೆ ಪೆಟ್ಟು ಮಾಡಿಕೊಂಡ ಬಾಲಕ ಸಾವನ್ನಪ್ಪಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಆರನೇ ತರಗತಿ ಓದುತ್ತಿದ್ದ ಬಾಲಕ ಪರೀಕ್ಷೆಯಲ್ಲಿ ಫೇಲಾಗಿದ್ದ. ಈ ಕಾರಣಕ್ಕೆ ಶಿಕ್ಷಕರು ಆತನ ತಲೆಗೆ ಹೊಡೆದಿದ್ದರು. ಇದರಿಂದಾಗಿ ಆತ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದಿದ್ದಾನೆ.ಆದರೆ ಶಾಲಾ ಆಡಳಿತ ಮಂಡಳಿ ಹೇಳುವುದೇ ಬೇರೆ. ಬಾಲಕನ ಪೋಷಕರಿಗೆ ಕರೆ ಮಾಡಿದ್ದ ಶಾಲೆಯವರು ಬಾಲಕ ಅಸ್ವಸ್ಥನಾಗಿದ್ದ ಎಂದಿದ್ದರು. ಆದರೆ ಇದನ್ನು ಒಪ್ಪದ ತಂದೆ ಈಗ ಪೊಲೀಸರಿಗೆ ದೂರು