ವಿದ್ಯಾರ್ಥಿನಿಯ ಮೇಲೆ ಮಾನಭಂಗ ಎಸಗಿದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ವಡೋದರಾ| pavithra| Last Modified ಶುಕ್ರವಾರ, 22 ಜನವರಿ 2021 (07:22 IST)
ವಡೋದರಾ : ವಿದ್ಯಾರ್ಥಿನಿಯ ಮೇಲೆ ಮಾನಭಂಗ ಎಸಗಿದ ಶಿಕ್ಷಕನಿಗೆ ಕೋರ್ಟ್ 13,000 ರೂ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿಕ್ಷಕ ಉತ್ತಮ ಅಂಕಗಳನ್ನು ನೀಡುವ ಆಮಿಷಯೊಡ್ಡಿ 16 ವರ್ಷದ ವಿದ್ಯಾರ್ಥಿನಿಯನ್ನು ಹೋಟೆಲ್ ಗೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿ ಬೆದರಿಸುವುದರ ಮೂಲಕ ಪದೇ ಪದೇ 3 ಬಾರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನನ್ನು ಬಂಧಿಸಿ ಸಾಕ್ಷ್ಯಗಳನ್ನು ಕೋರ್ಟ್ ಗೆ ಒದಗಿಸಿದ ಹಿನ್ನಲೆಯಲ್ಲಿ ಕೋರ್ಟ್ ಆತನಿಗೆ 13,000 ರೂ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದೆ.ಇದರಲ್ಲಿ ಇನ್ನಷ್ಟು ಓದಿ :