ನವದೆಹಲಿ : ಪಂಜಾಬ್ ನ ಜಲಂಧರ್ ಜಿಲ್ಲೆಯಲ್ಲಿ ಮಹಿಳಾ ಶಿಕ್ಷಕಿಯೊಬ್ಬಳು ತನ್ನ ಜಾತಕದಲ್ಲಿರುವ ದೋಷವನ್ನು ನಿವಾರಿಸಲು ತನ್ನ 13 ವರ್ಷದ ವಿದ್ಯಾರ್ಥಿಯನ್ನು ಬಲವಂತವಾಗಿ ಮದುವೆಯಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಶಿಕ್ಷಕಿಗೆ ಜಾತಕದಲ್ಲಿ ದೋಷವಿದ್ದ ಕಾರಣ ಅಪ್ರಾಪ್ತ ಹುಡುಗನೊಂದಿಗೆ ಮದುವೆಯಾಗಲು ಜ್ಯೋತಿಷಿಗಳೊಬ್ಬರು ಹೇಳಿದ್ದರು. ಹಾಗಾಗಿ ಶಿಕ್ಷಕಿ ತನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ ಹುಡುಗನನ್ನು ತರಗತಿಯ ನೆಪದಲ್ಲಿ ತನ್ನ ಮನೆಯಲ್ಲಿಯೇ ಇರಿಸಿಕೊಂಡು ಬಲವಂತವಾಗಿ ಮದುವೆಯಾಗಿದ್ದಾಳೆ.ಅಷ್ಟೇ ಅಲ್ಲದೇ ಮೊದಲ ರಾತ್ರಿಯನ್ನು ಕೂಡ ನಡೆಸುವಂತೆ ಒತ್ತಾಯಿಸಲಾಗಿತ್ತು.