ವಯಸ್ಸಾದ ವ್ಯಕ್ತಿಯ ಬಲವಂತವಾಗಿ ಮದುವೆಯಾದ ವಿದ್ಯಾರ್ಥಿನಿಯ ರಕ್ಷಿಸಿದ ಶಿಕ್ಷಕ

ಡೆಹ್ರಾಡೂನ್| Krishnaveni K| Last Modified ಗುರುವಾರ, 8 ಏಪ್ರಿಲ್ 2021 (09:17 IST)
ಡೆಹ್ರಾಡೂನ್: ಬಲವಂತವಾಗಿ ವಯಸ್ಸಾದ ವ್ಯಕ್ತಿ ಮದುವೆ ಮಾಡಿಕೊಂಡ ಅಪ್ರಾಪ್ತ ಬಾಲಕಿಯನ್ನು ಆಕೆಯ ಶಿಕ್ಷಕ ರಕ್ಷಿಸಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

 
ಲಾಕ್ ಡೌನ್ ಸಮಯದಲ್ಲಿ ಹಣಕ್ಕಾಗಿ ವೃದ್ಧ, ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ. ಲಾಕ್ ಡೌನ್ ಬಳಿಕ ಶಾಲೆ ಶುರುವಾದ ಮೇಲೂ ವಿದ್ಯಾರ್ಥಿನಿ ಶಾಲೆಗೆ ಬಂದಿರಲಿಲ್ಲ. ಹೀಗಾಗಿ ಶಿಕ್ಷಕರು ನೇರವಾಗಿ ಆಕೆಯ ಮನೆಗೆ ಹೋಗಿ ವಿಚಾರಣೆ ನಡೆಸಿದ್ದರು.
 
ಬಳಿಕ ವಿಷಯ ತಿಳಿದ ಶಿಕ್ಷಕರು ಮನೆ ಮನೆಗೆ ತೆರಳಿ ವಿಚಾರಣೆ ನಡೆಸಿದ್ದರು. ಆ ಮೂಲಕ ಬಾಲಕಿಯನ್ನು ಶಿಕ್ಷಕರು ಪತ್ತೆ ಮಾಡಿದ್ದರು. ಆ ಸಂದರ್ಭದಲ್ಲಿ ಆಕೆಯ ಸ್ಥಿತಿ ಹೀನಾಯವಾಗಿತ್ತು ಎನ್ನಲಾಗಿದೆ. ನನ್ನ ಪತಿ ತನಗೆ ಹೊಡೆದು ಹಿಂಸಿಸುತ್ತಿದ್ದಾನೆ ಎಂದು ಶಿಕ್ಷಕನೆದುರು ಅಳಲುತೋಡಿಕೊಂಡಿದ್ದಾಳೆ. ಬಳಿಕ ಬಾಲಕಿಯನ್ನು ರಕ್ಷಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :