ರಾಯ್ಪುರ : ಮದ್ಯ ಸೇವಿಸಿ ಶಾಲೆಗೆ ಬಂದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್ನಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಛತ್ತೀಸ್ಗಢದ ಜಶ್ಪುರದಲ್ಲಿ ನಡೆದಿದೆ.ಸಾಮಾನ್ಯವಾಗಿ ತಂದೆ, ತಾಯಿ ಬಳಿಕ ವಿದ್ಯೆ ಕಲಿಸುವ ಗುರುವಿಗೆ ಪೂಜ್ಯ ಸ್ಥಾನವನ್ನು ನೀಡಲಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿಬುದ್ದಿ ಹೇಳಬೇಕಾದ ಗುರುವೇ ಶಾಲೆಗೆ ಮದ್ಯ ಸೇವಿಸಿ ಬರುವುದು ವಿಪರ್ಯಾಸ ಎಂದೇ ಹೇಳಬಹುದು.ಮಾರ್ಚ್ 10 ರಂದು ಜಶ್ಪುರದ ಶಾಲೆವೊಂದರಲ್ಲಿ ಶಿಕ್ಷಕ ದಿನೇಶ್ ಕುಮಾರ್ ಲಕ್ಷ್ಮೆ ಮದ್ಯ ಸೇವಿಸಿ ಶಾಲೆಗೆ ಬಂದಿದ್ದರು.ಈ