ಭುವನೇಶ್ವರ್ : ಶಾಲಾ ಶುಲ್ಕವನ್ನು ಪಾವತಿಸದ 34 ವಿದ್ಯಾರ್ಥಿಗಳನ್ನು 5 ಗಂಟೆಗಳ ಕಾಲ ಶಾಲಾ ಗ್ರಂಥಾಲಯದಲ್ಲಿ ಬಂಧಿಸಿದ ಘಟನೆ ಓಡಿಶಾದ ಭುವೇನಶ್ವರ ನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.ಶುಲ್ಕ ಪಾವತಿಸದ 3 ರಿಂದ 9 ನೇ ತರಗತಿಯ 34 ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಬರಲು ಶಿಕ್ಷಕರು ತಿಳಿಸಿದ್ದಾರೆ. ಇದಾದ ನಂತರ ಅಲ್ಲೇ 5 ಗಂಟೆಗಳ ಕಾಲ ಅವರನ್ನು ಬಂಧಿಸಿ ಗ್ರಂಥಾಲಯದ ಕೋಠಡಿಗೆ ಬೀಗ ಹಾಕಿದ್ದಾರೆ.ಘಟನೆಗೆ ಸಂಬಂಧಿಸಿ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.