ಲಕ್ನೋ: 2007 ರ ಟಿ20 ವಿಶ್ವಕಪ್ ಫೈನಲ್ ನ ಕೊನೆಯ ಓವರ್ ನ ಹೀರೋ ಟೀಂ ಇಂಡಿಯಾ ಕ್ರಿಕೆಟಿಗ ಜೋಗಿಂದರ್ ಶರ್ಮಾ ತಂದೆಗೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಇರಿದು ಹಣದೊಂದಿಗೆ ಪರಾರಿಯಾಗಿದ್ದಾರೆ.ಸ್ವಂತ ಬೇಕರಿ ಅಂಗಡಿಯೊಂದನ್ನು ನಡೆಸುತ್ತಿರುವ ಜೋಗಿಂದರ್ ಶರ್ಮಾ ತಂದೆ ಓಂ ಪ್ರಕಾಶ್ ಶರ್ಮಾ ರಾತ್ರಿ ಅಂಗಡಿ ಮುಚ್ಚಿ ಬಾಗಿಲು ಹಾಕಿ ಮನೆಗೆ ತೆರಳಬೇಕೆನ್ನುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ತೀವ್ರ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.ಬೇಕರಿಗೆ ಬಂದಿದ್ದ