ರಾಜ್ ಕೋಟ್: ಆರು ತಿಂಗಳಿನಿಂದ ಮನೆಯ ಕೊಠಡಿಯಲ್ಲಿ ಗೃಹ ಬಂಧನಲ್ಲಿದ್ದ 25 ವರ್ಷದ ಯುವತಿಯನ್ನು ಹೊರತಂದ ಬಳಿಕ ಆಕೆ ಸಾವನ್ನಪ್ಪಿರುವ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.ಕೆಲವು ಮೌಢ್ಯಗಳನ್ನು ನಂಬಿ ಕುಟುಂಬ ಸದಸ್ಯರು ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದರು. ಕಳೆದ ಒಂದು ವಾರದಿಂದ ಆಕೆಗೆ ಅನ್ನಾಹರವನ್ನೂ ನೀಡಿರಲಿಲ್ಲ. ಆಕೆಯ ದಯನೀಯ ಅವಸ್ಥೆಗೆ ಬೇಸತ್ತ ನೆರೆಹೊರೆಯವರು ಎನ್ ಜಿಒ ಸಂಸ್ಥೆಯೊಂದಕ್ಕೆ ಕರೆ ಮಾಡಿ ದೂರು ನೀಡಿದ್ದರು. ಸ್ವಯಂ ಸಂಸ್ಥೆ ಪೊಲೀಸರ ಸಹಾಯದಿಂದ