ಮೇವು ತರಲು ಹೋದ ಯುವತಿಯ ಶೀಲಕೆಡಿಸಿದ ದುರುಳರು

ಲಕ್ನೋ| Krishnaveni K| Last Modified ಸೋಮವಾರ, 25 ಜನವರಿ 2021 (07:52 IST)
ಲಕ್ನೋ: ರಾಸುಗಳಿಗೆ ಮೇವು ತರಲು ಗದ್ದೆಗೆ ಹೋದ ಯುವತಿಯನ್ನು ಕಾಮುಕರ ಗುಂಪು ಶೀಲಕೆಡಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
18 ವರ್ಷದ ದಲಿತ ಯುವತಿಯನ್ನು ಅದೇ ಸಮುದಾಯಕ್ಕೆ ಸೇರಿದ ಯುವಕರ ಗುಂಪು ಮಾನಭಂಗ ಮಾಡಿದೆ. ನಿಗದಿತ ಸಮಯಕ್ಕೆ ಆಕೆ ಮರಳದೇ ಹೋದಾಗ ತಂದೆ ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯುವಕನೊಬ್ಬ ತನ್ನ ಪುತ್ರಿಗೆ ಗನ್ ತೋರಿಸಿ ಬೆದರಿಸುತ್ತಿದ್ದು, ಇನ್ನೊಬ್ಬ ಮಾನಭಂಗ ಮಾಡುವುದು ಕಂಡುಬಂದಿದೆ. ತಕ್ಷಣವೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :