ಬಿಹಾರ : ಸದನದಲ್ಲಿ ಕೇವಲ ನಾವು ಹಾಡುವುದಕ್ಕೆ, ಕುಣಿಯುವದಕ್ಕೆ ಮಾತ್ರ ಸೀಮಿತವಾಗಿದ್ದೇವೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ.ಸೋಮವಾರ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ವಿಶ್ವಾಸ ಮತ ಕೋರಲಿದ್ದು, ಇದಕ್ಕೂ ಮುನ್ನ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿದರು. ತೇಜಸ್ವಿ ಯಾದವ್, ನಿತೀಶ್ ಅವರು ಮತ್ತೆ ಪಕ್ಷ ಬದಲಿಸುವುದಿಲ್ಲ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಬಲ್ಲರೇ ಎಂದು ಸವಾಲೆಸೆದರು. ನಾವು ಸಮಾಜವಾದಿ ಕುಟುಂಬದಿಂದ ಬಂದಿದ್ದೇವೆ. ನಿತೀಶ್ ಕುಮಾರ್ ಸಹ ನಮ್ಮ ಕುಟುಂಬದ ಸದಸ್ಯ ಎಂದು ನಾವು ಭಾವಿಸಿದ್ದೇವೆ.