ಉಗ್ರರ ದಾಳಿಗೆ ತುತ್ತಾಗಿದ್ದ ಪಂಜಾಬ್`ನ ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮಿಲಿಟರಿ ನೆಲೆಯ ಕೂಗಳತೆಯ ದೂರಿನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಬ್ಯಾಗ್`ನಲ್ಲಿ ಮೊಬೈಲ್ ಟವರ್ ಬ್ಯಾಟರಿಗಳು ಪತ್ತೆಯಾಗಿವೆ. ಬ್ಯಾಗ್`ಗಳ ಮಾಲೀಕರಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಗುರುದಾಸ್ಪುರದ ಬಳಿ ಎಸ್`ಯುವಿ ಪತ್ತೆಯಾಗಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಕಾರಿನ ಮಾಲೀಕರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ.ಬೆಹ್ರಾಂಪುರ್ ಚೆಕ್ ಪೋಸ್ಟ್ ಬಳಿ ಎಸ್`ಯುವಿ ಕಾರು ತಪಾಸಣೆ