ಚಂಡೀಗಢ : ಹರಿಯಾಣದ ಪ್ರತ್ಯೇಕ ಮೂರು ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 17 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಅಂಬಾಲಾದ ಶಹಜಾದ್ಪುರದ ಕಕ್ಕರ್ ಮಜ್ರಾ ಗ್ರಾಮದ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ 8 ಜನರು ಮೃತಪಟ್ಟಿದ್ದಾರೆ. ಬಸ್ ಉತ್ತರ ಪ್ರದೇಶದ ಬರೇಲಿಯಿಂದ ಹಿಮಾಚಲ ಪ್ರದೇಶದ ಬಡ್ಡಿಗೆ ತೆರಳುತ್ತಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಶುಕ್ರವಾರ ನಸುಕಿನಲ್ಲಿ ಎನ್ಎಚ್-44 ರ ಸಮಲ್ಖಾದ ಜತಿಪುರ್ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ