ಠಾಕೂರ್ಗಂಜ್ನಲ್ಲಿ ಶಂಕಿತ ಉಗ್ರ ಮತ್ತು ಭಯೋತ್ಪಾದನೆ ನಿಗ್ರಹ ದಳದ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರಪ್ರದೇಶದ ಲಕ್ನೋದಲ್ಲಿರುವ ಠಾಕೂರ್ ಗಂಜ್ ಪ್ರದೇಶದ ಹಾಜಿ ಕಾಲೋನಿಯಲ್ಲಿ ಸುಮಾರು ಆರ್ಧ ಗಂಟೆಯಿಂದ ಎಟಿಎಸ್ ಮತ್ತು ಉಗ್ರನ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು ವರದಿಗಳ ಪ್ರಕಾರ, ಸೈಫುಲ್ಲಾ ಎನ್ನುವ ಉಗ್ರ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿವೆ