ನವದೆಹಲಿ: ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆಗೆ ಪ್ರಮುಖ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಸಂಚು ರೂಪಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಉಗ್ರರು ಈ ರೀತಿ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.ಆತ್ಮಾಹುತಿ ದಾಳಿ ಇಲ್ಲವೇ ಇತರ ಯಾವುದೇ ರೂಪದಲ್ಲೂ ಮೋದಿ ಮತ್ತು ಅಜಿತ್ ದೋವಲ್ ಹತ್ಯೆ ಮಾಡಲು ಜೈಶ್ ಸಂಘಟನೆ ಸಂಚು ಮಾಡಿದೆಯಂತೆ. ಜಮ್ಮು