ದೆಹಲಿ(ಆ.14): ಭಾನುವಾರ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಶನಿವಾರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿಭಜನೆಯ ಭಯಾನಕತೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆ.14ನ್ನು ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಿಸಲಾಗುತ್ತದೆ ಎಂದಿದ್ದಾರೆ. ವಿಭಜನೆಯ ಸಂದರ್ಭ ಜನರ ತ್ಯಾಗಗಳು, ಕಷ್ಟಗಳು, ಹೋರಾಟಗಳ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ವಿಭಜನೆಯ ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬುದ್ಧಿಹೀನರ ದ್ವೇಷ ಮತ್ತು ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರಿಯರು