ನವದೆಹಲಿ : ಗುಜರಾತ್ ಕರಾವಳಿಗೆ ಆತಂಕ ಸೃಷ್ಟಿಸಿದ ವಾಯು ಚಂಡಮಾರುತ ಮಧ್ಯರಾತ್ರಿ ಸಮುದ್ರದತ್ತ ಪಥ ಬದಲಿಸಿದ ಹಿನ್ನಲೆಯಲ್ಲಿ ಗುಜರಾತ್ ಕರಾವಳಿಗೆ ವಾಯು ಚಂಡಮಾರುತ ಅಪ್ಪಳಿಸುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಪಥ ಬದಲಿಸಿರುವುದರಿಂದ ಗುಜರಾತ್ ಜನರ ಆತಂಕ ದೂರವಾಗಿದ್ದರೂ ಕೂಡ ಗುಜರಾತ್ ಪಶ್ಚಿಮ ಕರಾವಳಿ, ಪರವಲ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 10,000 ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ. ಚಂಡಮಾರುತ ಹಾದುಹೋಗಬಹುದಾಗಿದ್ದ ಪ್ರದೇಶದಲ್ಲಿ ಸುಮಾರು 3 ಲಕ್ಷ