ವರದಕ್ಷಿಣೆ ಕೇಳಿದ ವರನೊಂದಿಗೆ ಮದುವೆ ನಿರಾಕರಿಸಿದ ವಧು

ಛತ್ತೀಸಗಢ| Hanumanthu.P| Last Modified ಭಾನುವಾರ, 17 ಡಿಸೆಂಬರ್ 2017 (14:55 IST)
ವರದಕ್ಷಿಣೆಗಾಗಿ ಬೇಡಿಕೆಯಿಟ್ಟದ್ದ ವರನೊಂದಿಗೆ ಮದುವೆಯನ್ನು ನಿರಾಕರಿಸಿರುವ ಘಟನೆ ಛತ್ತೀಸಗಢದ ಮುರಾದಾಬಾದ್‌ನಲ್ಲಿ ಜರುಗಿದೆ.
ಜ್ಯೋತಿ ಎಂಬ ವಧು ಬೆಂಗಳೂರಿನ ಮೂಲದ ವರ ಆಶೀಶ್‌ನೊಂದಿಗೆ ಮದುವೆಯನ್ನು ನಿರಾಕರಿಸಿದ್ದು, ಈ ಕುರಿತು ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾಳೆ.

ಜ್ಯೋತಿ ಮದುವೆ ಮಾಡಲು ಪೋಷಕರು ವೆಬ್‌ಸೈಟ್‌ನಲ್ಲಿ ಮಗಳ ವಿವರವನ್ನು ದಾಖಲಿಸಿದ್ದರು. ಈ ವಿವರಗಳಿಂದ ಸಂಬಂಧ ಕೂಡಿಕೊಂಡು ಡಿಸೆಂಬರ್ 14ರಂದು ಮದುವೆಗೆ ನಿರ್ಣಯಿಸಲಾಗಿತ್ತು. ಆದರೆ, ಮದುವೆಯ ಮುನ್ನ ನಡೆದ ಆರತಕ್ಷತೆ ಸಮಯದಲ್ಲಿ 15ಲಕ್ಷ ಹಾಗೂ ಕಾರಿಗೆ ಬೇಡಿಕೆಯಿಡಲಾಗಿದೆ. ಈ ಸಂದರ್ಭದಲ್ಲಿ ವರನೊಂದಿಗೆ ಮಾತನಾಡಿ ವಧು ಮದುವೆಯಾದ ನಂತರ ದುಡಿದರೆ ಹಣ ಸಂಪಾದನೆ ಮಾಡಿದರಾಯಿತು ಎಂದು ತಿಳಿಹೇಳಿಲು ಪ್ರಯತ್ನ ಕೂಡ ನಡೆಸಿದ್ದಾಳೆ.

ವರನ ಪೋಷಕರು ಮಾತ್ರ ಹಣ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇದರಿಂದ ತಂದೆಗೆ ಅವಮಾನ ಆಗುವುದನ್ನು ಸಹಿಸಲಾಗದೆ ವಧು ಮದುವೆಯನ್ನು ನಿರಾಕರಿಸಿ ವರ ಹಾಗೂ ಕುಟುಂಬದವರನ್ನು ಮದುವೆ ಮಂಟಪದಿಂದ ಹೊರ ನಡೆಯಲು ಸೂಚಿಸಿದ್ದಾಳೆ. ವಧುವಿನ ಕಾರ್ಯಕ್ಕೆ ಕುಟುಂಬದವರಿಂದ ಬೆಂಬಲ ವ್ಯಕ್ತವಾಗಿದ್ದು, ವಧುವಿನ ಹೇಳಿಕೆ ಪಡೆದಿರುವ ಪೊಲೀಸರು ವರದಕ್ಷೆಣೆ ಪ್ರಕರಣ ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :