ನವದೆಹಲಿ : ವಿಶ್ವವನ್ನು ಕಾಡಿದ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಭಾರತವು ಕೊರೊನಾ ಪ್ರತಿಬಂಧಕ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಚರಿತ್ರಾರ್ಹ ಸಾಧನೆಯನ್ನು ಮಾಡಿದೆ. ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ಲಸಿಕೆ ಪ್ರಕ್ರಿಯೆ ಆರಂಭವಾದ 9 ತಿಂಗಳುಗಳ ಅವಧಿಯಲ್ಲಿ 100 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ದಾಖಲೆ ನಿರ್ಮಿಸಿದೆ. 2020ರ ಮಾರ್ಚ್ನಲ್ಲಿ ದೇಶಕ್ಕೆ ಕಾಲಿರಿಸಿದ ಕೊರೊನಾ ಸಾಂಕ್ರಾಮಿಕದ ಪ್ರಥಮ ಅಲೆ ದೇಶದಲ್ಲಿ