ಮುಂಬೈ : ರಸ್ತೆ ಅಪಘಾತದ ಗಲಾಟೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ಘೋಷಿಸಿದ ಮಹಾರಾಷ್ಟ್ರದ ಮಾಲೆಗಾಂವ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ಜೈಲು ಶಿಕ್ಷೆಗೆ ಬದಲಾಗಿ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಮತ್ತು ನಿತ್ಯ 2 ಸಸಿಗಳನ್ನು ನೆಟ್ಟು ಪೊಷಿಸುವಂತೆ ಸೂಚಿಸಿ ವಿಭಿನ್ನ ಆದೇಶ ಹೊರಡಿಸಿದೆ. 1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್ನ ಸೆಕ್ಷನ್ 3 ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು