ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಅವರ ಸಹೋದರ ಹಾಗೂ ಇತರ ಇಬ್ಬರನ್ನು ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಗುರುವಾರ ದಿಲ್ಲಿಯ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದೆ. ಈ ಸಂದರ್ಭ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ದೇಶ ವಿಭಜನೆಯ ನಂತರ ನಡೆದ ಅತ್ಯಂತ ಕೆಟ್ಟ ಮತೀಯ ಹಿಂಸಾಚಾರವನ್ನು ಇತಿಹಾಸ ಹಿಂದಿರುಗಿ ನೋಡಿದಾಗ, ಸೂಕ್ತ ತನಿಖೆ ನಡೆಸಲು ತನಿಖಾ ಏಜನ್ಸಿಯ ವೈಫಲ್ಯವು ಪ್ರಜಾಪ್ರಭುತ್ವದ ಕಾವಲುಗರರಿಗೆ ಖಂಡಿತವಾಗಿಯೂ ಯಾತನೆ ನೀಡಲಿದೆ,