ಮಧ್ಯಪ್ರದೇಶ : ಅತ್ಯಾಚಾರ ಎಸಗಲು ಪ್ರಯತ್ನಿಸಿದ ಕಾಮುಕರಿಂದ ಬಾಲಕಿಯೊಬ್ಬಳನ್ನ ಆಕೆ ಸಾಕಿದ ನಾಯಿಯೇ ರಕ್ಷಿಸಿ ಆರೋಪಿಗಳನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಕರೀಲಾ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವೇಳೆ ಅಪ್ರಾಪ್ತ ಬಾಲಕಿ ತನ್ನ ಸಾಕುನಾಯಿಯೊಂದಿಗೆ ಮನೆಯಿಂದ ಹೊರಗಡೆ ಹೋದಾಗ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಇಬ್ಬರು ದುಷ್ಕರ್ಮಿಗಳು ಯತ್ನಿಸಿದರು. ಆಗ ಬಾಲಕಿಯ ಜತೆಗಿದ್ದ ಸಾಕು ನಾಯಿ ಇಬ್ಬರು